ಬುಧವಾರ, ಸೆಪ್ಟೆಂಬರ್ 21, 2016

ಬದಲಾಗುತ್ತಿದೆ ಕಾಶ್ಮೀರ; ಎಚ್ಚೆತ್ತುಕೊಳ್ಳಬೇಕಿದೆ ಭಾರತ

ಕಾಶ್ಮೀರದಲ್ಲಿ ಮರುಹುಟ್ಟು ಪಡೆದುಕೊಳ್ಳುವ ಉಗ್ರವಾದ ಹಿಂದಿನ ಎಲ್ಲ ಉಗ್ರ ಚಟುವಟಿಕೆಗಳಿಗಿಂತ ವಿಭಿನ್ನವಾಗಿ ಮತ್ತು ಅವೆಲ್ಲವುಗಳನ್ನು ಮೀರಿ ಭಾರತದ ಕಾಶ್ಮೀರ ನೀತಿಯನ್ನು ಕೆಣಕಲಿದೆ!
- ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು

ಅಲಯನ್ಸ್ ವಿಶ್ವವಿದ್ಯಾಲಯ)

ಕಾಶ್ಮೀರದ ಕಣಿವೆಯಲ್ಲಿ ಹಿಂಸಾಚಾರದ ನೆಪದಲ್ಲಿ ರಕ್ತ ಚೆಲ್ಲಾಡುವುದು ಸದ್ಯಕ್ಕೆ ನಿಲ್ಲುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ ಹಿಂದೆ ಕಾಶ್ಮೀರ ಕಂಡ ಪ್ರತ್ಯೇಕತಾವಾದಿ ಪ್ರತಿಭಟನೆಗಳುಭಯೋತ್ಪಾದಕರ ತಂತ್ರಗಳು ಮತ್ತು ಅವುಗಳಸ್ವಭಾವ ತ್ವರಿತವಾಗಿ ಬದಲಾಗಿ ಹೋಗುತ್ತಿದೆಹೌದುಕಾಶ್ಮೀರದ ಸಮಸ್ಯೆ ಹಿಂದಿನಂತಿಲ್ಲಏಷ್ಯಾ ರಾಜಕೀಯದ  ಸಂಕೀರ್ಣ ಸಮಸ್ಯೆಯ ಸ್ವಭಾವ ಹಂತ ಹಂತವಾಗಿ ಜಟಿಲಗೊಳ್ಳುತ್ತಾ ಸಾಗುತ್ತಿದೆಬುರ್ಹಾನ್ ವಾನಿ ಹತ್ಯೆಯ ನಂತರಕಾಶ್ಮೀರದ ಪ್ರತಿಭಟನೆಗಳು ಮತ್ತದರ ಆಸುಪಾಸಿನ ವಿದ್ಯಮಾನಗಳು ಕಾಶ್ಮೀರವನ್ನು ಸಂಕೀರ್ಣತೆಯ ಇನ್ನೊಂದು ಮಟ್ಟಕ್ಕೆ ತಲುಪಿಸುವಲ್ಲಿ ಭಾಗಶಃ ಯಶಸ್ವಿಯಾಗಿವೆ ಬೆಳವಣಿಗೆಗಳ ಬಗ್ಗೆ ಚಿತ್ರಣ ಅಸ್ಪಷ್ಟವಾಗಿದ್ದರೂ ಭಾರತಸಮಗ್ರತೆ ಮತ್ತು ಭದ್ರತೆಗೆ ಮಗ್ಗುಲ ಮುಳ್ಳಾಗುವ ಎಲ್ಲಾ ಸೂಚನೆಗಳನ್ನೂ ಈಗಾಗಲೇ ತೋರ್ಪಡಿಸಿವೆ.

ಬುರ್ಹಾನ್ ವಾನಿ ಹತ್ಯೆಯ ಬಗ್ಗೆ ನಡೆದ ಚರ್ಚೆಗಳು ಮತ್ತು ಭದ್ರತಾ ಪಡೆಗಳ ಬದ್ಧತೆಯನ್ನು ಪ್ರಶ್ನಿಸುವ ಪ್ರಯತ್ನಗಳು ಇನ್ನೂ ಚಾಲ್ತಿಯಲ್ಲಿರುವಾಗಲೇ ಕಾಶ್ಮೀರ ಭಾರತದಿಂದ ದೂರಾಗಲು ಇನ್ನೊಂದು ಹೆಜ್ಜೆ ಮುಂದಿಟ್ಟಿದೆ ಪ್ರಕ್ರಿಯೆಬುರ್ಹಾನ್ ವಾನಿ ಹತ್ಯೆಗೂ ಮೊದಲೇ ಜಾರಿಯಲ್ಲಿತ್ತುವಾನಿ ಮತ್ತು ಆತನ ಸಹವರ್ತಿಗಳು ಮಿಲಿಟರಿ ವಸ್ತ್ರಗಳಲ್ಲಿ ಆಯುಧ ಸಮೇತರಾಗಿ ಫೋಟೋ ತೆಗೆದುಕೊಂಡುನಂತರ ಸಾಮಾಜಿಕ ಜಾಲತಾಣಗಳಲ್ಲಿ  ಫೋಟೋಗಳನ್ನುತೇಲಿಬಿಟ್ಟು ಕಾಶ್ಮೀರಿಗಳನ್ನು ಉಗ್ರವಾದದೆಡೆ ಆಕರ್ಷಿಸುತ್ತಿದ್ದಾಗಲೇ ಭದ್ರತಾ ಪಡೆಗಳು ಈತನ ಬಗ್ಗೆ ಒಂದು ಕಣ್ಣಿಟ್ಟಿದ್ದರುಗಮನಿಸಬೇಕಾದ ವಿಷಯವೇನೆಂದರೆ ವಾನಿ ಮತ್ತವನ ಸಹವರ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮಮುಖವನ್ನು ಅಡಗಿಸುವ ಅಥವಾ ಗುರುತನ್ನು ಮುಚ್ಚಿಟ್ಟುಕೊಳ್ಳುವ ಯಾವುದೇ ಪ್ರಯತ್ನ ಮಾಡಿಲ್ಲಭಾರತದೊಳಗಿನ ಬುದ್ಧಿಜೀವಿಗಳು ವಾನಿ ಭಯೋತ್ಪಾದಕನಲ್ಲ ಅವನೊಬ್ಬ ಸೇನೆಯ ದೌರ್ಜನ್ಯಕ್ಕೆ ಬಲಿಯಾದ ಅಮಾಯಕ (?)ಪ್ರತ್ಯೇಕತಾವಾದಿ ಎಂದು ಬಾಯಿ ಬಡಿದುಕೊಳ್ಳುತ್ತಿದ್ದರೂವಾನಿ ಮತ್ತವನ ಸಹಚರರು ತಮ್ಮನ್ನು ತಾವು ಭಯೋತ್ಪಾದಕರು ಮತ್ತು ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುವ ಯಾವುದೇ ಅವಕಾಶವನ್ನೂ ಕೈಬಿಟ್ಟಿಲ್ಲ!

ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಉಗ್ರ ಸಂಘಟನೆಗಳು ಹೊಸ ಸದಸ್ಯರನ್ನು ನೇಮಕ ಮಾಡಿಕೊಳ್ಳುತ್ತಿರುವುದು ಇವತ್ತಿಗೆ ರಹಸ್ಯವಾಗೇನೂ ಉಳಿದಿಲ್ಲಸ್ಕ್ಯಾಂಡಿನೇವಿಯನ್ ದೇಶಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಯಾವುದೇನೇರ ನೆಲೆಗಳನ್ನು ಹೊಂದಿಲ್ಲವಾದರೂ ತನ್ನ ಸದಸ್ಯತ್ವವನ್ನು ಪರಿಣಾಮಕಾರಿಯಾಗಿ ವೃದ್ಧಿಸಿಕೊಂಡಿದ್ದು ಇದೇ ಸಾಮಾಜಿಕ ಕಜಾಲತಾಣಗಳ ಮೂಲಕಕಾಶ್ಮೀರದಲ್ಲಿ ಬುರ್ಹಾನ್ ವಾನಿ ಕೂಡ ಇದೇ ತಂತ್ರದ ಮೂಲಕ ಹೊಸ ಸದಸ್ಯರನ್ನುಆಕರ್ಷಿಸಿಕಾಶ್ಮೀರದಲ್ಲಿ ಕಡಿಮೆಯಾಗಿದ್ದ ಉಗ್ರ ಚಟುವಟಿಕೆಗಳನ್ನು ಮತ್ತೆ ಪ್ರೇರೆಪಿಸುವ ಷಡ್ಯಂತ್ರ ರಚಿಸಿದ್ದಆದರೆ ಇದೀಗ ಕಾಶ್ಮೀರದಲ್ಲಿ ಮರುಹುಟ್ಟು ಪಡೆದುಕೊಳ್ಳುವ ಉಗ್ರವಾದ ಹಿಂದಿನ ಎಲ್ಲ ಉಗ್ರ ಚಟುವಟಿಕೆಗಳಿಗಿಂತ ವಿಭಿನ್ನವಾಗಿಮತ್ತು ಅವೆಲ್ಲವುಗಳನ್ನು ಮೀರಿ ಭಾರತದ ಕಾಶ್ಮೀರ ನೀತಿಯನ್ನು ಕೆಣಕಲಿದೆ!

ಜೂನ್ ೨೦೧೬ರಲ್ಲಿ ವಾನಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಕೊನೆಯ ವಿಡಿಯೋದಲ್ಲಿ ಭಾರತದ ಸಂವಿಧಾನಕ್ಕೆ ಬದ್ಧವಾಗಿರುವ ಎಲ್ಲರ ವಿರುದ್ಧವೂ ತನ್ನ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಸರ್ವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಕಾಶ್ಮೀರ ಮಾತ್ರವಲ್ಲ ಇಡಿ ವಿಶ್ವವನ್ನೇ ನಿಯಂತ್ರಿಸುವ ಖಲೀಫೇಟ್ ಸ್ಥಾಪಿಸುವ ಉದ್ದೇಶವನ್ನೂ ಇದೇ ವಿಡಿಯೋ ಕ್ಲಿಪ್ ಒಳಗೊಂಡಿತ್ತುಆಘಾತಕಾರಿ ಸಂಗತಿಯೆಂದರೆ ವಾನಿಯ ವಿಡಿಯೋ ವಾಣಿ  ಎರಡುಅಂಶಗಳನ್ನಿಟ್ಟುಕೊಂಡು ಕಾಶ್ಮೀರಿಗಳನ್ನು ಆಕರ್ಷಿಸುತ್ತಿದೆಯೆಂದಾದಲ್ಲಿಕಾಶ್ಮೀರದ ಮುಂದಿನ ಸಮಸ್ಯೆಗಳು ಖಲೀಫೇಟ್ ಮತ್ತು ಇಸ್ಲಾಮಿಕ್ ಸ್ಟೇಟ್ ಗಳ ಜೊತೆ ತಳುಕುಹಾಕಿಕೊಳ್ಳುವುದರಲ್ಲಿ ಅನುಮಾನವಿಲ್ಲವಾನಿ ಹತ್ಯೆಯ ನಂತರದಕಾಶ್ಮೀರ ಇದನ್ನು ಅಕ್ಷರಶಃ ಸಾಬೀತುಪಡಿಸಿತ್ತುಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡು ಪೊಲೀಸ್ ಠಾಣೆಗಳುಭದ್ರತಾ ಪಡೆಗಳ ನೆಲೆಗಳು ಹಾಗೂ ಸರಕಾರಿ ಕಟ್ಟಡಗಳ ಮೇಲೆ ಕಲ್ಲೆಸೆತ ಸಾಮಾನ್ಯವಾಗಿ ಹೋಯ್ತುರಕ್ಷಣಾಪಡೆಗಳು ಮತ್ತು ಅವರ ಕುಟುಂಬ ಸದಸ್ಯರನ್ನೇ ಗುರಿಯಾಗಿಸಿರಿಸಿಕೊಂಡು ಹಲವು ದಾಳಿಗಳನ್ನು ನಡೆಸಲಾಯಿತುಸಂಗಮ್ ಎಂಬ ಸ್ಥಳದಲ್ಲಿ ಗುಂಪೊಂದು ಪೊಲೀಸ್ ಬಂಕರ್ ವಾಹನವನ್ನು ನೀರಿಗೆ ತಳ್ಳುವುದರ ಜೊತೆಗೆ ಚಾಲಕಫಿರೋಜ್ ಅಹ್ಮದ್ ಸಾವನ್ನಪ್ಪಿದರುಕೆಲದಿನಗಳ ನಂತರ ಚಂಡಿಗ್ರಾಮ್ ನಲ್ಲಿ ಉದ್ರಿಕ್ತ ಜನರ ಗುಂಪೊಂದು ಸಬ್ ಇನ್ಸ್ ಪೆಕ್ಟರ್ ಮಹಮ್ಮದ್ ಅಶ್ರಫ್ ಪಾಲ್ ಮನೆಗೆ ನುಗ್ಗಿ ಅವರ ಹೆಂಡತಿ ಮತ್ತು ಮಗಳ ಮೇಲೆ ಹಲ್ಲೆ ಮಾಡಿತ್ತುಕುಲ್ಗಾಮ್ನಲ್ಲಿ ಪ್ರತಿಭಟನಾಕಾರರು ಪೊಲೀಸ್ ಠಾಣೆಯತ್ತ ಕಲ್ಲೆಸೆಯುತ್ತಿದ್ದಾಗಜನರ ನಡುವೆ ಇದ್ದ ವ್ಯಕ್ತಿಯೊಬ್ಬ ಗ್ರೆನೇಡ್ ಎಸೆದು ಒಬ್ಬ ಕಾನ್ಸಟೇಬಲ್ ಸಾವಿಗೆ ಕಾರಣನಾಗಿದ್ದಾನೆಉಗ್ರಗಾಮಿಗಳು ಪ್ರತಿಭಟನಾಕಾರರ ಮಧ್ಯೆ ಸೇರಿಕೊಂಡು ಇಂಥಕೃತ್ಯಗಳನ್ನೆಸಗುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ.

ಕಾಶ್ಮೀರದ  ಉಗ್ರ ಸಂಸ್ಕೃತಿ ಮತ್ತು ಹಿಂಸೆಗೆ ಬಲಿಯಾಗುತ್ತಿರುವುದು ಪೊಲೀಸ್ ಮತ್ತು ರಕ್ಷಣಾ ಪಡೆಗಳಷ್ಟೇ ಅಲ್ಲಪ್ರತಿಭಟನಾಕಾರರ ಗುಂಪೊಂದು ನಡಿಹಾಲ್ ನಲ್ಲಿರುವ ಶಾಲೆಯ ಮೇಲೂ ಕಲ್ಲೆಸೆದಿದ್ದುಪ್ರಾಂಶುಪಾಲ ಅಬ್ದುಲ್ ರಶೀದ್ಮಲಿಕ್ ಆಸ್ಪತ್ರೆ ಸೇರುವಂತಾಗಿದೆಪತ್ರಕರ್ತರ ಮೇಲೂ ದಾಳಿಗಳಾಗಿದ್ದುಪತ್ರಿಕಾ ಕಛೇರಿಗಳಿಗೆ ಧಮಕಿ ಮತ್ತು ಬೆದರಿಕೆ ಕರೆಗಳಿಲ್ಲದೆ ಕಾಶ್ಮೀರದಲ್ಲಿ ಸೂರ್ಯ ಮುಳುಗುವುದಿಲ್ಲಪ್ರತ್ಯೇಕತಾವಾದಿಗಳು ತಮ್ಮ ಜೊತೆ ಸೇರದಕಾಶ್ಮೀರಿಯನ್ನು 'ದ್ರೋಹಿಎಂದು ಪರಿಗಣಿಸುತ್ತಾರೆಲಷ್ಕರ್  ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಗಳು ಕಾಶ್ಮೀರಿಗಳು ಪ್ರತ್ಯೇಕತಾವಾದಿ ಹೋರಾಟದಲ್ಲಿ ಕೈಜೋಡಿಸಲೇಬೇಕು ಎಂಬ ಅನಧಿಕೃತ ಆದೇಶವನ್ನೇ ಹೊರಡಿಸಿದ್ದಾರೆ.ಪಾಕ್ ಪರ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಒಪ್ಪಿಕೊಂಡುಕಾಶ್ಮೀರಿಗಳು ತಮ್ಮದೇ ಮನೆಯಲ್ಲಿ ಪರಕೀಯರಂತೆ ಬದುಕುತ್ತಿದ್ದಾರೆಮಾರಣಹೋಮ ನಡೆಸಬಲ್ಲ ಕಿರಾತಕ ಭಯೋತ್ಪಾದಕರ ಆದೇಶವನ್ನು ಧಿಕ್ಕರಿಸುವಂಥವಾತಾವರಣ ಕಾಶ್ಮೀರದಲ್ಲಿಲ್ಲ ಎನ್ನುವುದು ಕಹಿಯಾದರೂ ಒಪ್ಪಿಕೊಳ್ಳಬೇಕಾದ ಸತ್ಯ.

ಕಾಶ್ಮೀರದಲ್ಲಿ ಪಾಕಿಸ್ತಾನದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ಹುರಿಯತ್ ಸಂಘಟನೆಯೂ ಪ್ರಭಾವ ಕಳೆದುಕೊಳ್ಳುತ್ತಿದೆಅನೂಹ್ಯ ತಿರುವುಗಳನ್ನು ಪಡೆದುಕೊಂಡಿರುವ ಕಾಶ್ಮೀರದ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನುನಿಯಂತ್ರಿಸುವ ಶಕ್ತಿಯನ್ನು ಹುರಿಯತ್ ಉಳಿಸಿಕೊಂಡಿಲ್ಲಇತ್ತೀಚೆಗೆ ನಡೆದ ಪ್ರತಿಭಟನೆಗಳಲ್ಲಿ ಹಿಂಸೆಯಲ್ಲಿ ನಿರತರಾಗಿದ್ದ ಪ್ರತ್ಯೇಕತಾವಾದಿಗಳು ಹುರಿಯತ್ ತತ್ವಗಳನ್ನು ಗಾಳಿಗೆ ತೂರಿದ್ದು ಸ್ಪಷ್ಟವಾಗಿತ್ತುಕಾಶ್ಮೀರದಲ್ಲಿ ಹುರಿಯತ್ಬೆಂಬಲದಿಂದ ಹಾರಾಡುತ್ತಿದ್ದ ಪಾಕಿಸ್ತಾನದ ಧ್ವಜಗಳಿಗೆ ಬದಲಾಗಿ ಇಸ್ಲಾಮಿಕ್ ಸ್ಟೇಟ್ ಧ್ವಜಗಳು ಕಾಣಿಸಿಕೊಳ್ಳುತ್ತಿರುವುದರಿಂದ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಕಾಶ್ಮೀರದ ಸ್ಥಿತಿಈಗಾಗಲೇ ಕಾಶ್ಮೀರದ ಪ್ರತ್ಯೇಕತಾವಾದಿಗಳುಇಸ್ಲಾಮಿಕ್ ಸ್ಟೇಟ್ ತಂತ್ರಗಳನ್ನು ಬಳಸಿಕೊಳ್ಳಲು ಆರಂಭಿಸಿವೆ.2015ರಲ್ಲಿ ಅಲ್ ಖೈದಾ ಜೊತೆ ಮನಸ್ತಾಪದಿಂದಾಗಿ ಪ್ರತ್ಯೇಕಗೊಂಡು ಇಸ್ಲಾಮಿಕ್ ಸ್ಟೇಟ್ ಕಟ್ಟಿಕೊಂಡ ಅಬು ಬಕರ್ ಅಲ್ ಬಗ್ದಾದಿ ಮಾದರಿಯಂತೆ ಹಿಜ್ಬುಲ್ಮುಜಾಹಿದ್ದೀನ್ ತೊರೆದು ಅಬ್ದುಲ್ ಕ್ವಾಯುಮ್ ನಜರ್ ಸೃಷ್ಟಿಸಿದ ಲಷ್ಕರ್ - ಇಸ್ಲಾಮ್ ಕಾಶ್ಮೀರದಲ್ಲಿ ಇಸ್ಲಾಮಿಕ್ ಸ್ಟೇಟ್ ನೆರಳು ಬೀಳುವಂತೆ ಮಾಡಿದೆ ಹೊಸ ಬೆಳವಣಿಗೆಯೊಂದಿಗೆ ಕಾಶ್ಮೀರದ ಸಮಸ್ಯೆಭಾರತ ಮಾತ್ರವಲ್ಲಇಡೀ ವಿಶ್ವವೇ ತಲೆಕೆಡಿಸಿಕೊಳ್ಳುವಂತೆ ಮಾಡಲಿದೆ.

ಸದ್ಯದ ಪರಿಸ್ಥಿತಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಎಂಬ ಜ್ವರದ ರೋಗಲಕ್ಷಣಗಳು ಕಾಶ್ಮೀರದಲ್ಲಿ ಕಾಣಿಸಿಕೊಳ್ಳಲಾರಂಬಿಸಿದೆಯಷ್ಟೇಇಸ್ಲಾಮಿಕ್ ಸ್ಟೇಟ್ ಕಾಶ್ಮೀರದಲ್ಲಿ ನೆಲೆಯೂರುವ ಸ್ಪಷ್ಟ ಪ್ರಯತ್ನಗಳನ್ನು ಮಾಡುವ ಮೊದಲೇ ಭಾರತದಎಚ್ಚೆತುಕೊಳ್ಳಬೇಕಾಗುತ್ತದೆಇಲ್ಲಿಯವರೆಗೆ ಭಾರತ ಮತ್ತು ಭಾರತೀಯರು ಎದುರಿಸಿದ ಕಾಶ್ಮೀರದ ಪ್ರಶ್ನೆಗಳು ಹೊಸ ಸಂಕೀರ್ಣತೆಯತ್ತ ಹೊರಳಿಕೊಳ್ಳುವ ಮುನ್ನ ಮಿಂಚಿನ ವೇಗದ ಯೋಚನೆ ಮತ್ತು ಪ್ರತಿಕ್ರಿಯೆಗಳನ್ನು ಭಾರತದಿಂದಕಾಶ್ಮೀರ ನಿರೀಕ್ಷಿಸುತ್ತದೆ.



(This article was published in Vishwavani newspaper on 20 September 2016)







      KEERTHIRAJ (keerthiraj886@gmail.com)
      Assistant Professor
International Relations and Political Science
Alliance University, Bangalore.