ಬುಧವಾರ, ಸೆಪ್ಟೆಂಬರ್ 21, 2016

ಅಫ್ಘನ್ ಸ್ಥಿರತೆಗೆ ಭಾರತದ ನೆರವು

ಪದೇ ಪದೇ ಶಕ್ತಿ ರಾಜಕೀಯದ ದಾಳವಾಗಿ ಉಪಯೋಗಿಸಲ್ಪಟ್ಟ ಅಫ್ಘಾನಿಸ್ತಾನದಲ್ಲಿ ಗಾಂಧಾರ ಚಿತ್ರಕಲೆಯ ಗತವೈಭವವ ಸಂಪೂರ್ಣವಾಗಿ ಮರೆಯಾಗಿ ನಿರಂತರ ಕಲಹಗಳ ಕೂಪವಾಗಿ ಗುರುತಿಸಿಕೊಂಡಿದ್ದು ದುರಂತ.
- ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು
ಅಲಯನ್ಸ್ ವಿಶ್ವವಿದ್ಯಾಲಯ)

ವಿಶ್ವ ರಾಜಕೀಯದ ಚದುರಂಗದಾಟದಲ್ಲಿ ಮತ್ತು ಶಕ್ತಿ ಸಂಘರ್ಷದಲ್ಲಿ ದಾಳವಾಗಿ ಉಪಯೋಗಿಸಲ್ಪಟ್ಟಿರುವ ಹಾಗೂ ಇವತ್ತಿಗೂ ಉಪಯೋಗಿಸಲ್ಪಡುತ್ತಿರುವ ರಾಷ್ಟ್ರ ಅಫ್ಘಾನಿಸ್ತಾನ. ಭಾರತದಲ್ಲಿ ಅಧಿಪತ್ಯ ಸಾಧಿಸಿದ್ದ ಬ್ರಿಟಿಷ್ಸಾಮ್ರಾಜ್ಯಶಾಹಿಗೆ ಅಫ್ಘಾನಿಸ್ತಾನದಂಥ ಆಯಕಟ್ಟಿನ ಪ್ರದೇಶದ ಮೇಲೆ ಹಿಡಿತ ಸಾಧಿಸಬೇಕೆಂಬ ಛಲ 1839ರಿಂದ 1919ರವರೆಗೆ ಮೂರು ಆಂಗ್ಲೊ-ಅಫ್ಘನ್ ಯುದ್ಧಗಳಿಗೆ ದಾರಿ ಮಾಡಿಕೊಟ್ಟಿತ್ತು. ಮುಂದೆ ಬಹಳಷ್ಟು ನಾಯಕರನ್ನು ಮತ್ತುಸರಕಾರಗಳನ್ನು ಕಂಡ ಅಫ್ಘನ್ನರಿಗೆ ಸಂಘರ್ಷಗಳೇ ಇತಿಹಾಸವಾಯ್ತೇ ವಿನಃ ದಕ್ಷ ಮತ್ತು ಶಾಂತಿಯುತ ಆಡಳಿತ ಕನಸಿನ ಮಾತಾಯಿತು.

1978ರಲ್ಲಿ ಸೊವಿಯೆತ್ ಒಕ್ಕೂಟದ ಕೃಪಾಕಟಾಕ್ಷದಲ್ಲಿ ಕಮ್ಯುನಿಸ್ಟ್ ಪ್ರಭುತ್ವ ಅಫ್ಘಾನಿಸ್ತಾನ ಅಧಿಕಾರಕ್ಕೆ ಬಂದಾಗಲೂ  ದೇಶದ ಹಣೆಬರಹ ಬದಲಾಗಲಿಲ್ಲಇಸ್ಲಾಮಿಕ್ ಸಂಪ್ರದಾಯವಾದಿಗಳು ಮತ್ತು ಮುಜಾಹಿದ್ದೀನ್ ಗಳು ಕಮ್ಯುನಿಸ್ಟ್ಸರಕಾರವನ್ನು ತೆಲೆಕೆಳಗು ಮಾಡುವ ಪ್ರಯತ್ನದಲ್ಲಿ ಮತ್ತೊಂದು ಸಂಘರ್ಷಕ್ಕೆ ವೇದಿಕೆ ಸಿದ್ಧಗೊಂಡು ಸೊವಿಯೆತ್ ಸೈನ್ಯ ನೇರವಾಗಿ ಅಫ್ಘನ್ ನೆಲಕ್ಕೆ ನುಗ್ಗಿತ್ತು!1979 ಕೊನೆಯಲ್ಲಿ ಅಫ್ಘಾನಿಸ್ತಾನದಲ್ಲಿದ್ದ ಕಮ್ಯುನಿಸ್ಟ್ ಸರಕಾರವನ್ನುಪತನದಂಚಿನಿಂದ ಕಾಪಾಡಲು ಆಗಿನ ಕಮ್ಯುನಿಸ್ಟರ ದೊಡ್ಡಣ್ಣ ಸೊವಿಯೆತ್ ಸೇನೆಯನ್ನು ಕಳುಹಿಸಲು ನಿರ್ಧರಿಸಿತ್ತುಸೊವಿಯೆತ್   ನಿರ್ಧಾರ ನಂತರದ ದಿನಗಳಲ್ಲಿ ಬ್ರಿಝ್ನೇವ್ ಡಾಕ್ಟ್ರಿನ್ ಎಂದು ಪ್ರಖ್ಯಾತವಾಯ್ತುಇಷ್ಟೆಲ್ಲಾ ನಡೆದಮೇಲೆ ನಿರೀಕ್ಷೆಯಂತೆಯೇ ಅಮೆರಿಕಾ ಕೂಡ ಕಮ್ಯುನಿಸ್ಟ್ ಸರಕಾರ ವಿರೋಧಿಗಳಾದ ಮುಜಾಹಿದ್ದೀನ್ ಗಳಿಗೆ ಆರ್ಥಿಕ ಮತ್ತು ಶಸ್ತ್ರಾಸ್ತ್ರಗಳ ನೆರವು ನೀಡಿ ಸೊವಿಯೆತ್ ಸೈನ್ಯದ ವಿರುದ್ಧ ಛೂ ಬಿಟ್ಟಿತುಸುಮಾರು ಒಂದು ದಶಕದ ರಕ್ತಸಿಕ್ತಸಂಘರ್ಷದ ಬಳಿಕ ಸೊವಿಯೆತ್ ತನ್ನ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಹಿಂಪಡೆದುಕೊಂಡಿತಾದರೂ ಅಮೆರಿಕಾ ನೆರವಿನಿಂದ ಕೊಬ್ಬಿದ್ದ ಮುಜಾಹಿದ್ದೀನ್ಗಳು ಭಯೋತ್ಪಾದಕರಾಗಿ ಬದಲಾಗಿ ಹೋದರು!

ಅಮೆರಿಕಾ ತನ್ನ ರಾಜಕೀಯ ಉದ್ದೇಶಗಳಿಗೋಸ್ಕರ ಮಣಿಸಲು ಮೂಲಭೂತವಾದಿ ಸಂಘಟನೆಗಳಿಗೆ ಆಧುನಿಕ ಶಸ್ತ್ರಾಸ್ತ್ರಗಳ ಜೊತೆ ವಿಶೇಷ ತರಬೇತಿ ನೀಡಿದ್ದು ದೀರ್ಘಾವದಿಯಲ್ಲಿ ವಿಶ್ವಶಾಂತಿಗೆ ಕಂಟಕವಾಗಿ ಮಾರ್ಪಡುತ್ತದೆಇದು ಅಂತರ್ರಾಷ್ಟ್ರೀಯ ರಾಜಕಾರಣದಲ್ಲಿ ಅಮೆರಿಕಾ ಮುಂದಾಲೋಚನೆಯಿಲ್ಲದೆ ಮಾಡಿದ ದೊಡ್ಡ ಎಡವಟ್ಟು . ಮುಂದೆ  ಭಯೋತ್ಪಾದನೆ ಭಾರತವನ್ನು ಒಳಗೊಂಡಂತೆ ಇನ್ನಿತರ ರಾಷ್ಟ್ರಗಳನ್ನು ಬಿಟ್ಟೂ ಬಿಡದೆ ಕಾಡಿದವುಅಫ್ಗಾನಿಸ್ತಾನದಲ್ಲಿಭಯೋತ್ಪಾದನೆಯ ಕಿಡಿ ಹಚ್ಚಿದ ಅಮೆರಿಕಾಗೆ ಇದರ ಬಿಸಿ ಮುಟಿದ್ದು 11 ಸೆಪ್ಟೆಂಬರ್ 2001ರಲ್ಲಿ ಅಲ್ ಖೈದಾ ಅಮೆರಿಕಾದ ಹೃದಯ ಭಾಗಕ್ಕೆ ಮರೆಯಲಾಗದ ಏಟು ಕೊಟ್ಟಾಗಲೇಅಮೆರಿಕನ್ನರ ಪ್ರತಿಷ್ಟೆಗೆ ಮುಟ್ಟಿ ನೋಡಿಕೊಳ್ಳುವಂಥಪೆಟ್ಟು ಬಿದ್ದಿತ್ತುಅಧ್ಯಕ್ಷ ಬುಶ್ ಸಿಟ್ಟಿನ ಭರದಲ್ಲಿ ಅಕ್ಷರಶಃ ಹುಚ್ಚನಾಗಿ ಹೋಗಿದ್ದ.   ಹೊತ್ತಿಗಾಗಲೇ ಅಫ್ಗಾನಿಸ್ತಾನದಲ್ಲಿ ಅಧಿಕಾರ ಹಿಡಿದುಕೊಂಡಿದ್ದ ತಾಲಿಬಾನ್ ಸರಕಾರ 11/9 ದಾಳಿಗೆ ಕಾರಣನಾಗಿದ್ದ ಒಸಾಮ ಬಿನ್ ಲಾಡೆನ್ ಗೆ ಆಶ್ರಯನೀಡಿತ್ತುಇದೊಂದು ಕಾರಣ ಸಾಕಾಯ್ತು ಅಮೆರಿಕನ್ನರಿಗೆ ಅಫ್ಘಾನಿಸ್ತಾನವನ್ನು ಪುಡಿಗಟ್ಟಲುಹೀಗೆ ಪದೇ ಪದೇ ಶಕ್ತಿ ರಾಜಕೀಯದ ದಾಳವಾಗಿ ಉಪಯೋಗಿಸಲ್ಪಟ್ಟ ಅಫ್ಘಾನಿಸ್ತಾನದಲ್ಲಿ  ಗಾಂಧಾರ ಚಿತ್ರಕಲೆಯ ಗತವೈಭವವ ಸಂಪೂರ್ಣವಾಗಿ ಮರೆಯಾಗಿ ನಿರಂತರ ಕಲಹಗಳ ಕೂಪವಾಗಿ ಗುರುತಿಸಿಕೊಂಡಿದ್ದು ದುರಂತ.

ವಿಚಿತ್ರ ಸಂಘರ್ಷಗಳ ನಾಡು ಅಫ್ಘಾನಿಸ್ತಾನದ ಆಯಕಟ್ಟಿನ ಭೂಪ್ರದೇಶ ಇವತ್ತಿಗೆ ಕಳ್ಳಸಾಗಣೆಗೆ ಉಪಯೋಗಿಸಲ್ಪಡುತ್ತಿದೆಅಮೂಲ್ಯ ಮುತ್ತು ರತ್ನಗಳುಅಫೀಮುಗಳ ಕಳ್ಳಸಾಗಣೆ ಜೊತೆ ಉಗ್ರವಾದ ಮತ್ತು ಉಗ್ರವಾದಿಗಳಿಗೂ ಸ್ವರ್ಗಎನ್ನುವಂತಾಗಿದೆ ಮಧ್ಯೆ ಅಮೆರಿಕಾ ತನ್ನ ಸ್ವಹಿತಾಸಕ್ತಿಗಳು ಮತ್ತು ಭಯೋತ್ಪಾದನೆಯಿಂದ  ದೇಶವನ್ನು ಮುಕ್ತಗೊಳಿಸಲು ಅಫ್ಘಾನಿಸ್ತಾನವನ್ನು ಅಸ್ಥಿರತೆಯಿಂದ ಮೇಲೆತ್ತುವ ಹಲವು ಪ್ರಯತ್ನಗಳನ್ನು ಮಾಡಿತ್ತು ಪ್ರಯತ್ನಗಳಲ್ಲಿಅಮೆರಿಕಾ ಏಷ್ಯಾದಲ್ಲಿ ತನ್ನ ಬಹುಕಾಲದ ಮಿತ್ರ ಪಾಕಿಸ್ತಾನವನ್ನು ತನ್ನ ದಳಪತಿಯನ್ನಾಗಿಸಿತ್ತುಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನದಲ್ಲಿ ಸ್ಥಿರತೆ ಸಾಧಿಸುವ ಪ್ರಯತ್ನದಲ್ಲಿ ಪಾಕ್ ಅಮೆರಿಕಾದ ಧಾರಾಳತನವನ್ನು ಉಪಯೋಗಿಸಿಕೊಂಡುಅದನ್ನು ಭಾರತವಿರೋಧಿ ಚಟುವಟಿಕೆಗಳಲ್ಲಿ ಬಳಸಿಕೊಂಡಿತ್ತುಅಮೆರಿಕಾ ಅಫ್ಘಾನಿಸ್ತಾನದ ಸ್ಥಿರತೆಯ ಜವಾಬ್ದಾರಿಯನ್ನು ದಶಕಗಳಿಂದ ಪಾಕಿಸ್ತಾನದ ಸುಪರ್ದಿಗೊಪ್ಪಿಸಿದ್ದರೂ ಗುಲಗಂಜಿಯಷ್ಟೂ ಬದಲಾವಣೆ ಕಾಣಲಿಲ್ಲಭಾರತ ಜೊತೆಹಗೆ ಸಾಧಿಸುವುದನ್ನೇ ವಿದೇಶಾಂಗ ನೀತಿ ಮಾಡಿಕೊಂಡ ಪಾಕಿಸ್ತಾನದಿಂದ ಜಾಗತಿಕ ಸಮಸ್ಯೆಗಳಿಗೆ ಸೃಜನಾತ್ಮಕ ಪ್ರತಿಕ್ರಿಯೆ ನಿರೀಕ್ಷಿಸುವುದಾದರೂ ಹೇಗೆಕೊನೆಗೂ ಸಮಸ್ಯೆಗೆ ಕಾರಣವಾಗುತ್ತಿರುವ ತಾಲಿಬಾನ್ ಗುಂಪುಗಳನ್ನುನಿಗ್ರಹಿಸುವ ಕಡೆಗೆ ಅಥವಾ ಮಾತುಕತೆಯ ಮೂಲಕ ತೀರ್ಮಾನಿಸಿಕೊಳ್ಳುವತ್ತ ಪಾಕಿಸ್ತಾನದಿಂದ ಯಾವುದೇ ಯಾವುದೇ ಸಹಾಯವನ್ನೂ ನಿರೀಕ್ಷಿಸುವಂತಿಲ್ಲ ಎಂದು  ಅಫ್ಘಾನಿಸ್ತಾನದ ರಾಜಕೀಯ ನೇತಾರಿಗೆ ಮನವರಿಕೆಯಾಗಿತ್ತು.

2015 ನವೆಂಬರ್ ನಲ್ಲಿ ಭಾರತ ಅಫ್ಘಾನಿಸ್ತಾನಕ್ಕೆ ಮಿ-25 ಗನ್ ಶಿಪ್ ಗಳನ್ನು ಒದಗಿಸಿದಾಗ ಪಾಕಿಸ್ತಾನ ಎಚ್ಚೆತ್ತುಕೊಂಡಿತ್ತುಮುಂದೆ ಭಾರತ ಅಫ್ಘಾನಿಸ್ತಾನಕ್ಕೆ 105 ಎಮ್ ಎಮ್ ಹೌವಿಟ್ಜರ್ ಫಿರಂಗಿಗಳನ್ನು ಪೂರೈಸಿದಾಗ ವಿಶ್ವಚದುರಂಗದ ಆಯಕಟ್ಟಿನ ಪ್ರದೇಶ ಅಫ್ಘಾನಿಸ್ತಾನ ಭಾರತಕ್ಕೆ ಹತ್ತಿರವಾಗುವ ಎಲ್ಲಾ ಸೂಚನೆಗಳೂ ಕಂಡಿದ್ದವುಇತ್ತೀಚೆಗೆ ಅಮೆರಿಕನ್ ಡ್ರೋನ್ ಗಳು ಪಾಕಿಸ್ತಾನದೊಳಗೆ ತಾಲಿಬಾನ್ ಮುಖಂಡ ಮುಲ್ಲಾ ಮನ್ಸೂರ್ ಹತ್ಯೆ ಮಾಡಿದಾಗ,ಪ್ರಾದೇಶಿಕ ಶಾಂತಿ ಕಾಪಾಡುವಲ್ಲಿ ಅಮೆರಿಕಾ ಪಾಕಿಸ್ತಾನವನ್ನು ನೆಚ್ಚಿಕೊಂಡಿಲ್ಲ ಎಂಬ ಸಂದೇಶ ರವಾನಿಸಿತ್ತುಇವೆಲ್ಲವುಗಳ ಜೊತೆ ಅಮೆರಿಕಾ ಈಗಾಗಲೇ ಪಾಕಿಸ್ತಾನದ ಜೊತೆ ಮಾಡಿಕೊಂಡಿರುವ ಹಲವಾರು ರಕ್ಷಣಾ ಒಪ್ಪಂದಗಳನ್ನುರದ್ದುಗೊಳಿಸಿದೆಭಯೋತ್ಪಾದನಾ ನಿಗ್ರಹಕ್ಕಾಗಿ ಅಮೆರಿಕಾ ಪಾಕಿಸ್ತಾನಕ್ಕೆ  ಒದಗಿಸುತ್ತಿದ್ದ ಸರಿಸುಮಾರು 600 ಮಿಲಿಯನ್ ಡಾಲರ್ ಗಳ ನೆರವು ನಿಂತು ಹೋಗಿದೆಭಯೋತ್ಪಾದನಾ ನಿಗ್ರಹದ ಹೆಸರಿನಲ್ಲಿ ಅಮೆರಿಕಾದಿಂದ ಪಡೆದುಕೊಂಡಹಣ ಮತ್ತು ಆಯುಧಗಳನ್ನು ಭಾರತದ ವಿರುದ್ಧ ಉಪಯೋಗಿಸುವಲ್ಲಿ ಅಲ್ಪ ಮಟ್ಟಿನ ಕಡಿವಾಣ ಬೀಳಲಿದೆಪಾಕಿಸ್ತಾನದ ಪಾಲಿಗೆ ಗಾಯದ ಮೇಲೆ ಉಪ್ಪು ಸವರಿದಂತೆ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅಮೆರಿಕಾಭಾರತದ ಸಹಕಾರವನ್ನು ಮುಕ್ತವಾಗಿಯೇ ನಿರೀಕ್ಷಿಸುತ್ತಿದೆಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಇದೇ ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಭಾರತಅಮೆರಿಕಾ ಮತ್ತು ಅಫ್ಘಾನಿಸ್ತಾನಗಳನ್ನು ಒಳಗೊಂಡತ್ರಿಪಕ್ಷೀಯ ಸಭೆಯೊಂದನ್ನು ಸಂಯೋಜಿಸಿರುವುದು ಭಾರತ ಅಫ್ಘನ್ ನೆಲದಲ್ಲಿ ಕಾರ್ಯಪ್ರವೃತ್ತವಾಗಲು ಮತ್ತಷ್ಟು ಬಲ ತುಂಬಿದೆಇದಲ್ಲದೆ ಪ್ರಸಕ್ತ ಅಫ್ಘಾನಿಸ್ತಾನದಲ್ಲಿ ಸ್ಥಿರತೆ ಮತ್ತು ಶಾಂತಿ ಸ್ಥಾಪಿಸಲು ಕಾರ್ಯನಿರ್ವಹಿಸುತ್ತಿರುವನ್ಯಾಟೋ ಸೇನೆಯ ಕಮಾಂಡರ್ ಜನರಲ್ ಜಾನ್ ನಿಕೊಲಾಸ್ಅಫ್ಘನ್ ನೆಲದಲ್ಲಿ ಶಾಂತಿ ನೆಲೆಸಲು ಭಾರತದಿಂದ ತಾಂತ್ರಿಕ ಮತ್ತು ಮಿಲಿಟರಿ ಸಹಾಯದ ಅವಶ್ಯಕತೆಯನ್ನು ಪುನರ್ ಪ್ರಸ್ತಾಪಿಸಿದ್ದಾರೆ.


ಅಫ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿದೆ ಎಂಬ ಒಂದೇ ಕಾರಣಕ್ಕಾಗಿಪಾಕಿಸ್ತಾನ ಅಫ್ಘಾನ್ ನೆಲದ ಸ್ವಯಂಘೋಷಿತ ರಕ್ಷಕನಾಗಿ ಬದಲಾಗಿತ್ತುಇದೇ ನೆಪದಲ್ಲಿ ಅಮೆರಿಕಾದ ನೆರವನ್ನೂ ಮತ್ತು ಅಫ್ಘಾನಿಸ್ತಾನದ ಆಯಕಟ್ಟಿನಪ್ರದೇಶಗಳನ್ನೂ ತನಗೆ ಬೇಕು ಬೇಕಾದಂತೆ ದುರುಪಯೋಗ ಮಾಡಿಕೊಂಡಿತ್ತುಇದೀಗ ಅಫ್ಘಾನಿಸ್ತಾನ್ ರಕ್ಷಣೆಯ ಜವಾಬ್ದಾರಿ ಭಾರತಕ್ಕೆ ತಾನಾಗಿ ಒಲಿದು ಬಂದಿದೆಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಕೂಡ ಭಾರತದ ನೆರವಿನಿಂದ ಅಫ್ಘನ್ಸಮಸ್ಯೆಗಳನ್ನು ನಿವಾರಿಸುವ ಭರವಸೆಯಲ್ಲಿದ್ದಾರೆಪಾಕಿಸ್ತಾನದ ಇಬ್ಬಂದಿ ನೀತಿಗಳಿಂದ ಬೇಸತ್ತಿರುವ ಅಫ್ಘನ್ ಜನತೆ ಮತ್ತು ಆಡಳಿತ ಭಾರತದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದೆಅಫ್ಘನ್ ನಿರೀಕ್ಷೆಗಳಿಗೆ ಸಕಾರಾತ್ಮಕವಾಗಿಪ್ರಧಾನಿ ಮೋದಿ ಸ್ಪಂದಿಸಿರುವುದು  ಪ್ರಯತ್ನಗಳಿಗೆ ಹುರುಪು ತುಂಬಿದೆ.  ಪಾಕಿಸ್ತಾನ  ಬೆಳವಣಿಗೆಯಿಂದ ಪೆಚ್ಚಾಗಿರುವಾಗಲೇ ಅಫ್ಘನ್ ಸೇನಾ ಮುಖ್ಯಸ್ಥ ಜನರಲ್ ಕ್ವಾದಂ ಶಾ ಶಹಿಮ್ ಭಾರತದ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ಸುಹಾಗರನ್ನು ಭೇಟಿಯಾಗಿ ಯಶಸ್ವಿ ಮಾತುಕತೆ ನಡೆಸಿದ್ದಾರೆಸಮರತಾಂತ್ರಿಕ ಅಫ್ಘಾನಿಸ್ತಾನದಲ್ಲಿ ಪ್ರಭಾವ ಸ್ಥಾಪಿಸಲು ಪೈಪೋಟಿಯಲ್ಲಿರುವ ಪ್ರಬಲ ದೇಶಗಳು ನೋಡು ನೋಡುತ್ತಿರುವಂತೆಯೇಭಾರತ ಅಫ್ಘಾನಿಸ್ತಾನದಲ್ಲಿ ಮಹತ್ವದರಾಜತಾಂತ್ರಿಕ ಹೆಜ್ಜೆ ಇಡುತ್ತಿದೆ.


(This article was published in Hosa Diganta newspaper on 20 September 2016)







      KEERTHIRAJ (keerthiraj886@gmail.com)
      Assistant Professor
International Relations and Political Science
Alliance University, Bangalore. 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ